ರಾಮನಗರದಲ್ಲಿ ಮೂಲ ಸಂಸ್ಕೃತಿ-ಆದಿವಾಸಿ ಜಾನಪದ ಕಲಾ ಪ್ರದರ್ಶನ ವೈಭವ

ರಾಮನಗರ. ಆನಮಾನ ಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ರವರ ಸಹಕಾರದೊಂದಿಗೆ ಅಡವಿ ಪೌಂಡೇಷನ್ ರಾಮನಗರ ಇವರ ವತಿಯಿಂದ ನಡೆದ ಮೂಲ ಸಂಸ್ಕೃತಿ ಆದಿವಾಸಿ ಸಂಸ್ಕೃತಿ ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ವಿವಿಧ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಗಣ್ಯರನ್ನು ಕರೆ ತರಲಾಯಿತು ಮೆರವಣಿಗೆ ಕಲಾತಂಡಗಳನ್ನು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಸಬ್ಬನಹಳ್ಳಿ ರಾಜುರವರು ಉದ್ಘಾಟಿಸಿದರು ಹಾಗೂ ವೇದಿಕೆ ಕಾರ್ಯಕ್ರಮವನ್ನು ಜಾನಪದ ವಿದ್ವಾಂಸರು, ಜಾನಪದ ಲೋಕದ ಕ್ಯುರೆಟರ್ ಆದ ಡಾಕ್ಟರ್ ಯು ಎನ್ ರವಿರವರು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದ 51 ಬುಡಕಟ್ಟು ಸಮುದಾಯಗಳಲ್ಲಿ ಬಹಳ ವಿಶಿಷ್ಟವಾದ ಸಮುದಾಯ ಇರುಳಿಗ ಸಮುದಾಯ ಇವರ ಸಾಂಸ್ಕೃತಿಕ ಆಚರಣೆಗಳು ವಿಶಿಷ್ಟವಾಗಿವೆ ಎಂದು ತಿಳಿಸುತ್ತಾ ಬುಡಕಟ್ಟು ಸಮುದಾಯದ ಮಕ್ಕಳ ಪರಿಸರ ಜ್ಞಾನ ನಿಜಕ್ಕೂ ಆಶ್ಚರ್ಯ ಯಾವುದೇ ಮಕ್ಕಳನ್ನು ಮಾತನಾಡಿಸಿದರೆ ಅವರು ಸುಮಾರು 450 ರಿಂದ 500 ಕ್ಕೂ ಹೆಚ್ಚು ಗಿಡ, ಮರ,ಸಸ್ಯ, ಸೊಪ್ಪು,ನಾರು ಬೇರು, ಆಹಾರ, ಪ್ರಾಣಿ ಪಕ್ಷಿ, ಹಣ್ಣು ಗಳ ಪ್ರಭೇದಗಳನ್ನು ಹೇಳುತ್ತಾರೆ ಎಂದು ತಿಳಿಸುತ್ತಾ ಇಂದಿನ ಯುವ ಪೀಳಿಗೆ ಮೂಲ ಆಹಾರ ಪದ್ಧತಿಯನ್ನು ಮರೆಯುತ್ತಿದೆ ನಾವು ನಮ್ಮ ಜೀವನದಲ್ಲಿ ಆರೋಗ್ಯವಾಗಿ ಇರಬೇಕೆಂದರೆ ಮೂಲ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಈ ದಿನ ನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಸುಬ್ಬನಹಳ್ಳಿ ರಾಜುರವರು ಮಾತನಾಡಿ ಜಾನಪದ ಕಲೆಗಳನ್ನ ಉಳಿಸುವ ಮಹತ್ತರವಾದಂತಹ ಕೆಲಸವನ್ನು ಸಂಘ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿವೆ ಈ ತರಹನಾದ ಸಂಘ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ಸರ್ಕಾರ ನೀಡಬೇಕಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಪ್ರದರ್ಶನ ತಂಡಗಳಾದ ತಮಟೆ ವಾದನ, ಪೂಜಾ ಕುಣಿತ, ಹುಲಿ ವೇಷ, ಪಟದ ಕುಣಿತ, ಸೋಮನ ಕುಣಿತ, ಬೀಸುಕಂಸಾಳೆ, ಕರಗದ ಕುಣಿತ, ಆಲಕ್ಕಿ ಕುಣಿತ, ವನ್ನು ಕೂಡ್ಲೂರು ಮಧು ಸಾರಥ್ಯದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಲಾಯಿತು.
ಎಂಬಿ ಮಹಾದೇವರವರು ತಂಬೂರಿ ಶೈಲಿಯ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದ್ದರು, ಶೇಖರ್, ಗುರುಸಿದ್ದು, ಸಿದ್ದರಾಜು, ಎಸ್ ಬಿ ಗಂಗಾಧರ್ ತಂಡದವರು ಗೀತ ಗಾಯನ ನಡೆಸಿಕೊಟ್ಟರು.
ಮೇದರದೊಡ್ಡಿ ಹನುಮಂತು ಕವಿತೆ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಶಿವರಾಜ್ ಜೆ ಎಲ್ ರವರು ಮಾತನಾಡಿದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದ ಪ್ರಾಂಶುಪಾಲರಾದ ಎಂ ಮಹೇಶ್ ರವರು, ಸಂತೆಕಸಲಗೆರೆ ಬಸವರಾಜು, ನಿತ್ಯಸ್ನೇಹಿ ವೈರಮುಡಿ, ಗೋವಿಂದಯ್ಯ, ಕವಿ ಮೇದದೊಡ್ಡಿ ಹನುಮಂತ, ಅಡವಿ ಫೌಂಡೇಶನ್ ಸಂಸ್ಥಾಪನ ಅಧ್ಯಕ್ಷರಾದ ಶ್ರೀನಿವಾಸ್ ರವರು ಎಲ್ಲರನ್ನು ಸ್ವಾಗತಿಸಿ ವಂದನಾರ್ಪಣೆ ಮಾಡಿದರು.








