ಬೀದರ್‌ನಿಂದ ಬೆಂಗಳೂರುವರೆಗೆ 1150+ KM ಪಾದಯಾತ್ರೆ — ರೂಪೇಶ್ ಪುತ್ತೂರಿಗೆ ಭರ್ಜರಿ ಅಭಿನಂದನೆ!

ಪ್ರೊಫೆಸರ್ ರೂಪೇಶ್ ಪುತ್ತೂರು ಅವರು ಬೀದರ್ ನಿಂದ ಬೆಂಗಳೂರಿನವರೆಗೆ ಕೆಲವು ಸಾಮಾಜಿಕ ಕಳಕಳಿಯುಳ್ಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾಲ್ನಡಿಗೆಯಲ್ಲಿ ಸುಮಾರು 1150ಕ್ಕೂ ಹೆಚ್ಚು ಕಿಲೋ ಮೀಟರ್ ಗಳನ್ನ ಯಶಸ್ವಿಯಾಗಿ ಕ್ರಮಿಸಿದ್ದಾರೆ.. ಆದಕಾರಣ ಅಭಿನಂದನಾ ಸಮಾರಂಭವನ್ನು ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಸೇನೆ(ರಿ) ವತಿಯಿಂದ ಕುವೆಂಪು ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಬೆಂಗಳೂರು ಇಲ್ಲಿ ದಿನಾಂಕ 09-08-2026 ರಂದು ಆಯೋಜಿಸಲಾಗಿತ್ತು. ಸಂಘಟನೆ ವತಿಯಿಂದ ಸುಮಾರು 12 ಕಿಲೋಮೀಟರ್ಗಳ ದೂರವನ್ನು ರೂಪೇಶ್ ಪುತ್ತೂರು ರವರೊಟ್ಟಿಗೆ ಕಾಲ್ನಡಿಗೆ ಮೂಲಕ ಕ್ರಮಿಸಿ ಅವರ ಬೇಡಿಕೆಗಳ ಈಡೇರಿಕೆಗೆ ಬೆಂಬಲ ಸೂಚಿಸಲಾಯಿತು..








