ಸಾರಿಗೆ ಆಯುಕ್ತರ ಕಛೇರಿಯಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ, ಸಾರಿಗೆ ಆಯುಕ್ತರ ಕಚರಿಯರಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಯಿತು.
ಸಾರಿಗೆ ಇಲಾಖೆಗೆ 2024-25 ನೇ ಸಾಲಿಗೆ ರೂ. 12975.58 ಕೋಟಿಗಳ ರಾಜಸ್ವ ಸಂಗ್ರಹಣೆಯ ಗುರಿ ನಿಗದಿ ಪಡಿಸಿದ್ದು ಜುಲೈ 2024 ರ ಅಂತ್ಯಕ್ಕೆ ರೂ. 4325.19 ಕೋಟಿಗಳ ಎದುರಿಗೆ ರೂ 3534.14 ಕೋಟಿಗಳನ್ನು ಸಂಗ್ರಹಿಸಿ ಶೇಕಡ 81.71 ರಷ್ಟು ಗುರಿ ಸಾಧಿಸಲಾಗಿದ್ದು ರಾಜಸ್ವ ಸಂಗ್ರಹಣೆಯ ಗುರಿಯನ್ನು ಶೇಕಡ 100 ರಷ್ಟು ಸಾಧಿಸಲು ಪವರ್ತನ ಚಟುವಟಿಕೆಗಳೂ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಂಡು ಕಾರ್ಯನಿರ್ವಹಿಸಲು ನಿರ್ದೇಶಿಸಲಾಯಿತು.
2024-25 ನೇ ಸಾಲಿಗೆ ಪವರ್ತನದಲ್ಲಿ ವಾರ್ಷಿಕ 4,52,916 ಪ್ರಕರಣ ದಾಖಲಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು,ಜುಲೈ 2024ರ ಅಂತ್ಯಕ್ಕೆ 1,39,460 ಪ್ರಕರಣಗಳ ಎದುರಿಗೆ 1,21,943 ಪ್ರಕರಣಗಳನ್ನು ದಾಖಲಿಸಿ ಪವರ್ತನದಲ್ಲಿ ಶೇ/87.43 ರಷ್ಟು ಸಾಧನೆ ಮಾಡಲಾಗಿದೆ.
> ಪ್ರಸ್ತುತ ಇಲಾಖೆಗೆ ಹೊಸದಾಗಿ 85 ಮೋಟಾರು ವಾಹನ ನಿರೀಕ್ಷಕರು ನೇಮಕಗೊಂಡಿದ್ದು, ಇವರನ್ನು ಬಳಸಿಕೊಂಡು ಹಾಗೂ ರಸ್ತೆ ಸುರಕ್ಷತಾ ನಿಧಿಯಿಂದ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದ್ದು, ಅವುಗಳನ್ನು ಉಪಯೋಗಿಸಿಕೊಂಡು ಪವರ್ತನ ಚಟುವಟಿಕೆಗಳನ್ನು ಹೆಚ್ಚಿಸಿ, ಬಾಕಿ ಇರುವ ತೆರಿಗೆ ಮೊತ್ತವನ್ನು ವಸೂಲಿಸುವ ಮೂಲಕ ರಾಜಸ್ವ ಸಂಗ್ರಹಣೆಯ ಗುರಿಯನ್ನು ತಲುಪಲು ಶ್ರಮಿಸುವಂತೆ ಸೂಚಿಸಲಾಯಿತು.
ಬಾಕಿ ಇರುವ 6,77,348 ಡಿ.ಎಸ್.ಎ. ಕೇಸ್ಗಳನ್ನು ವಿಲೇಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಲು ಸೂಚಿಸಲಾಯಿತು.

ಎಲ್ಲಾ ಕಛೇರಿಯ ವ್ಯಾಪ್ತಿಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತಿದ್ದು, ರೂ.80.00 ಕೋಟಿಗಳ ವೆಚ್ಚದಲ್ಲಿ ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ, ದಾವಣಗೆರೆಗಳಲ್ಲಿ ಡ್ರೈವಿಂಗ್ ಟ್ರ್ಯಾಕ್ಗಳನ್ನು ನಿರ್ಮಿಸಲಾಗುತ್ತಿದೆ ಹಾಗೂ ರೂ.72.95 ಕೋಟಿಗಳ ವೆಚ್ಚದಲ್ಲಿ ತುಮಕೂರು, ಯಲಹಂಕ, ಶಿರಸಿ, ಸಕಲೇಶಪುರ, ಕೆ.ಜಿ.ಎಫ್. ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ದಾಂಡೇಲಿ, ಭಾಲ್ಕಿ ಮತ್ತು ಬೈಲಹೊಂಗಲಗಳಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಸದರಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಕಾಮಗಾರಿಗಳನ್ನು ಶೀರ್ಘವಾಗಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.
2024-25ನೇ ಸಾಲಿನಲ್ಲಿ 06 ಸ್ಥಳಗಳಲ್ಲಿ ರೂ.36.00 ಕೋಟಿಗಳ ವೆಚ್ಚದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸಲು ಆಯವ್ಯಯದಲ್ಲಿ ಘೋಷಣೆಯಾಗಿದ್ದು ಸದರಿ ಕಾಮಗಾರಿಗಳನ್ನು ಶೀರ್ಘವಾಗಿ ಪ್ರಾರಂಭಿಸಲು ಮವಹಿಸುವಂತೆ ಸೂಚಿಸಲಾಯಿತು.

ಅರ್ಹತಾ ಪತ್ರ ನವೀಕರಣಕ್ಕಾಗಿ (Fitness Renewal) ಬರುವ ವಾಹನಗಳನ್ನು ಕಡ್ಡಾಯವಾಗಿ ಅಕ್ಟೋಬ 2024ರಿಂದ ATSಗಳ ಮೂಲಕ ತಪಾಸಣೆಗೊಳಪಡಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಮೀನು ಲಭ್ಯವಿರುವ 13 ಸ್ಥಳಗಳಲ್ಲಿ (ದೇವನಹಳ್ಳಿ, ತುಮಕೂರು, ಕೋಲಾರ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಗದಗ, ರಾಣೆಬೆನ್ನೂರು, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೀದರ್, ಮತ್ತು ಯಾದಗಿರಿ) DBFOT ಮಾದರಿಯಲ್ಲಿ ಹಾಗೂ 19 ಸ್ಥಳಗಳಲ್ಲಿ (ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಕೇಂದ್ರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಮಡಿಕೇರೆ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಹೊಸಪೇಟೆ) BOO ಮಾದರಿಯಲ್ಲಿ ಸ್ವಯ೦ಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಸೆಪ್ಟೆಂಬರ್ 10ರ ನಂತರ ಎಲ್ಲಾ ಖಾಸಗಿ ಸೇವಾ (PSV) ವಾಹನಗಳಿಗೆ VLTD ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು ಈ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಲು ನಿರ್ದೇಶಿಸಲಾಯಿತು.
*******







