ಸಿಲ್ಕ್ ಬೋರ್ಡ್ ಟು ಹೆಬ್ಬಾಳ ಟನಲ್ ರೋಡ್ ನಿರ್ಮಾಣ; ಟ್ರಾಫಿಕ್ ಮುಕ್ತ ಸಂಚಾರ.

ಹಲವಾರು ವಿರೋಧದ ಮಧ್ಯೆಯೂ ಟ್ರಾಫಿಕ್ ಮುಕ್ತ ಸಂಚಾರಕ್ಕಾಗಿ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಸುರಂಗ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು 16.75 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಸಿದ್ಧತೆ ನಡೆಸಿದೆ. ಕೇವಲ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುರಂಗ ಮಾರ್ಗವು ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಸರ್ಕಾರವು 17,780.13 ಕೋಟಿ ರೂ ಮೀಸಲಿಟ್ಟಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.
ಸರ್ಕಾರವು ಬೆಂಗಳೂರಿನಲ್ಲಿ ಟನಲ್ ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಟನಲ್ ರಸ್ತೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 8000 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಟನಲ್ ರಸ್ತೆ ನಿರ್ಮಾಣಕ್ಕೆ ಎಷ್ಟೇ ವಿರೋಧ ವ್ಯಕ್ತವಾದರು ನಾವು ಕಾಮಗಾರಿ ಶುರು ಮಾಡುತ್ತೇವೆ ಎಂದು ಹೇಳಿದ್ದರು.
ಸುರಂಗ ಮಾರ್ಗ ಕಾಮಗಾರಿ ತ್ವರಿತ ಪೂರ್ನಗೊಳಿಸುವ ಭರವಸೆ ಸರ್ಕಾರ ನೀಡಿದೆ.ಇವು ದಿನದ 24 ಗಂಟೆಯೂ, ವಾರದ 7 ದಿನವೂ ಕೆಲಸ ಮಾಡುತ್ತವೆ.
ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳಕ್ಕೆ ಹೋಗಲು ಸರಾಸರಿ 90 ನಿಮಿಷಗಳು ಬೇಕಾಗುತ್ತದೆ. ಆದರೆ ಸುರಂಗ ಮಾರ್ಗ ನಿರ್ಮಾಣದ ನಂತರ ಕೇವಲ 45 ನಿಮಿಷ ನಿಮ್ಮ ಪ್ರಯಾಣದ ಸಮಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ಹೆಬ್ಬಾಳ -ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಆರಂಭ ಯಾವಾಗ? ಎಲ್ಲೆಲ್ಲಿ ಎಂಟ್ರಿ, ಎಕ್ಸಿಟ್? ಟೋಲ್ ಶುಲ್ಕ ಎಷ್ಟು?
ಸುರಂಗ ರಸ್ತೆ ನಿರ್ಮಾಣಕ್ಕೆ 17,780.13 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಪ್ಯಾಕೇಜ್-1ರಲ್ಲಿಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ವರೆಗೆ 8.748 ಕಿ.ಮೀ. ಉದ್ದದ ಸುರಂಗ ನಿರ್ಮಾಣಕ್ಕೆ 8814.78 ಕೋಟಿ ರೂ. ಹಾಗೂ ಪ್ಯಾಕೇಜ್-2ರಲ್ಲಿ ಫ್ರೀಡಂ ಪಾರ್ಕ್ನಿಂದ ಸಿಲ್ಕ್ ಬೋರ್ಡ್‌ವರೆಗೆ 8.748 ಕಿ.ಮೀ. ಉದ್ದದ ಸುರಂಗ ನಿರ್ಮಾಣಕ್ಕೆ 8965.35 ಕೋಟಿ ರೂ. ಅಂದಾಜು ವೆಚ್ಚ ಮಾಡಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿತ್ತು.







