F5 India News Health political

KRS’ ಪಕ್ಷದ ರಾಜ್ಯ ಉಪಾಧ್ಯಕ್ಷ HS ಲಿಂಗೇಗೌಡ ಸೇರಿ ಇಬ್ಬರು ಸಾವು.!

ಮಹಿಳೆಯರ ಮೇಲಿನ ಅತ್ಯಾಚಾರ ಗಳಿಗೆ ಅಂತ್ಯ ಹಾಡುವಾ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ,ಅತ್ಯಾಚಾರ ಪ್ರಕರಣಗಳ ಶೀಘ್ರವಿಚಾರಣೆನಡೆಸಿ, ಗರಿಷ್ಠಪ್ರಮಾಣದ ಶಿಕ್ಷೆ ಖಾತರಿಪಡಿಸಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿವರೆಗೆ ಪಾದಯಾತ್ರೆ ಹಮ್ಮಿಕ್ಕೊಂಡು ಗುಜರಾತ್ ನ ಸೂರತ್ ಬಳಿ ಪಾದಯಾತ್ರೆ ಸಾಗುವಾ ವೇಳೆ ಅಪಘಾತ ಉಂಟಾಗಿ ಈ ಅಪಘಾತದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್ ಎಚ್ ಲಿಂಗೇಗೌಡ ಹಾಗೂ ಮೂಸಾ ಷರೀಫ್ ಸಾವನ್ನಪ್ಪಿದ್ದಾರೆ.

ಮಂಗಳೂರಿನಿಂದ ದೆಹಲಿ ತಲುಪಿ ರಾಷ್ಟ್ರಪತಿಗಳು ಹಾಗು ಪ್ರಧಾನ ಮಂತ್ರಿಯವರಿಗೆ ನೇರವಾಗಿ ಮನವಿ ಸಲ್ಲಿಸಿ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಕಠಿಣ ಕಾನೂನು ರೂಪಿಸಲು ಮನವಿ ಮಾಡುವುದು ತನ್ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ನಾಂದಿಹಾಡಬೇಕು ಎಂಬುವುದು ಈ ತಂಡದ ಉದ್ದೇಶವಾಗಿತ್ತು ಆಕ್ಟೊಬರ್ ಹದಿನೇಳರಂದು ಮಂಗಳೂರಿನಲ್ಲಿ ಪಾದಯಾತ್ರೆ ಆರಂಭಿಸಿಹ ಈ ತಂಡ ನಿನ್ನೆ ಐವತ್ತೈದನೆ ದಿನ ಗುಜರಾತಿನ ಸೂರತ್ ಹಾಗು ಆಹಮದಬಾದಿನ ನಡುವೆ ಪಾದಯಾತ್ರೆಸಾಗಿತ್ತು.

ಮೂಲತಃ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಾದ ಮಂಗಳೂರಿನ ಪ್ರವೀಣ್ ನೇತೃತ್ವದಲ್ಲಿ ಮಂಗಳೂರಿನ ಮೂಸ ಷರಿಪ್ , ನೌಪುಲ್ ಅಬ್ಬಾಸ್, ಬಾಲಕೃಷ್ಣ, ಶುಕ್ರ ಆಹಮದ್, ಹಮ್ಝಾ ಅವರು ಪಾದಯಾತ್ರೆ ರೂಪಿಸಿದ್ದರು

ಎಸ್ ಎಚ್ ಲಿಂಗೇಗೌಡರು ಇವರೊಟ್ಟಿಗೆ ಸೇರಿ ಪಾದಯಾತ್ರೆ ಮಾಡುವಾ ಸಂದರ್ಭದಲ್ಲಿ ವಾಹನ ಪಾದಯಾತ್ರಿಗಳ ಮೇಲೆ ಹರಿದ ಪರಿಣಾಮ ಈ ಅವಘಡ ಸಂಭವಿಸಿ ಎಸ್ ಎಚ್ ಲಿಂಗೇಗೌಡ ಮತ್ತು ಮತ್ತೊಬ್ಬ ಪಾದಯಾತ್ರಿ ಮರಣಹೊಂದಿದ್ದಾರೆ.

johnprem

About Author

You may also like

Health

How does cholera come on .. How to prevent it?

Precautionary measures Maintain cleanliness around the home. If the kennel is mixed with water, immediately consider repairing it. Be cautious
Health Sports

Fight Coronavirus: Kohli tweeted

The whole world is the one to fight Corona. In India too, the war has been fought and many important